ವಾಹನ ಕಾಯಿದೆ ಉಲ್ಲಂಘಿಸಿದ ವಾಹನ ಚಾಲಕರಿಗೆ ಹಾಗೂ ಮಾಸ್ಕ ಧರಿಸದೇ ಓಡಾಡುವ ಸಾರ್ವಜನಿಕರಿಗೆ ದಂಡ: 1.16 ಲಕ್ಷ ರೂ.ದಂಡ ವಸೂಲಿ

ಶಿರಸಿ: ಮೋಟಾರು ವಾಹನ ಕಾಯಿದೆ ಉಲ್ಲಂಘಿಸಿದ ವಾಹನ ಚಾಲಕರಿಗೆ ಹಾಗೂ ಮಾಸ್ಕ ಧರಿಸದೇ ಓಡಾಡುವ ಸಾರ್ವಜನಿಕರಿಗೆ ಶಿರಸಿ ಉಪವಿಭಾಗದ ಪೊಲೀಸರು ಶುಕ್ರವಾರ ದಂಡದ ಬಿಸಿ ಮುಟ್ಟಿಸಿದ್ದು, ನಿಯಮ ಪಾಲನೆ ಮಾಡದವರಿಂದ ಒಂದೇ ದಿನದಲ್ಲಿ1.16 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ.

ಹೆಲೆಟ್ ಕಡ್ಡಾಯ ಸೇರಿದಂತೆ ವಿವಿಧ ಮೋಟಾರು ವಾಹನ ನಿಯಮ ಉಲ್ಲಂಘಿಸಿದ ಒಟ್ಟೂ 194 ಪ್ರಕರಣ ದಾಖಲಿಸಲಾಗಿದ್ದು,1.04 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಶಿರಸಿ ಉಪವಿಭಾಗದ ಡಿಎಸ್ಪಿ, ಸಿಪಿಐ ಕಚೇರಿಗಳು ಸೇರಿ ಒಟ್ಟೂ 11 ಪೊಲೀಸ್ ಠಾಣೆಯಿಂದ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದವರಿಗೆ ದಂಡ ವಿಧಿಸಲಾಗಿದೆ. ಇದೇ ವೇಳೆ ಕೋವಿಡ್ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಕ್ ಧರಿಸಿದೇ ಓಡಾಡುವ ಜನರಿಗೆ ಜಾಗೃತಿ ಮೂಡಿಸಿ ದಂಡದ ಬಿಸಿ ಮುಟ್ಟಿಸಿದ್ದು, 11 ವಿಭಾಗದಿಂದ 120 ಪ್ರಕರಣ ದಾಖಲಿಸಿ, 12 ಸಾವಿರ ದಂಡ ವಸೂಲಿ ಮಾಡಲಾಗಿದೆ.
ಸ್ವತಃ ಡಿಎಸ್ಪಿ ರವಿ ನಾಯ್ಕ, ಶಿರಸಿ ಸಿಪಿಐ ರಾಮಚಂದ್ರ ನಾಯ್ಕ, ಸಿದ್ದಾಪುರ,ಮುಂಡಗೋಡ ಸಿಪಿಐ ಗಳು ಖುದ್ದು ತಾವೇ ರಸ್ತೆಗೀಳಿದು ಮಾಸ್ಕಮತ್ತು ವಾಹನ ನಿಯಮ ಉಲ್ಲಂಘನೆ ವಿರುದ್ಧ ಜಾಗೃತಿ ನಡೆಸಿ, ದಂಡ ವಿಧಿಸಲಾಗಿದೆ.

WhatsApp
Facebook
Telegram
error: Content is protected !!
Scroll to Top