Bengaluru: ನಕಲಿ ಐಟಿ ಅಧಿಕಾರಿಗಳ ಹೆಸರಿನಲ್ಲಿ ಮನೆಗೆ ನುಗ್ಗಿದ್ದ ಐವರ ಬಂಧನ; ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ

ಜನವರಿ 23ರಂದು  ಸಂಜಯ ನಗರ(Sanjaya Nagara)ದ ಮನೆಯೊಂದಕ್ಕೆ‌ ನುಗ್ಗಿದ್ದ ಆರೋಪಿಗಳು 3.5 ಲಕ್ಷ ನಗದು ಮತ್ತು ಪಿಸ್ತೂಲ್ ದರೋಡೆ ಮಾಡಿದ್ದರು. ಸದ್ಯ ಸಂಜಯನಗರ ಪೊಲೀಸರು ಐವರನ್ನು ಬಂಧಿಸಿ, 1.7 ಲಕ್ಷ ನಗದು ಹಣ(Cash), 1 ಪಿಸ್ತೂಲ್(Gun), 1 ಕಾರು (Car) ಜಪ್ತಿ ಮಾಡಿದ್ದಾರೆ.

ಬಂಧಿತರು

ಬಂಧಿತರು

ನಕಲಿ ಐಟಿ ಅಧಿಕಾರಿಗಳ (Duplicate IT Officers) ಹೆಸರಿನಲ್ಲಿ ಮನೆಗೆ ಹಣ ದೋಚಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿ 23ರಂದು  ಸಂಜಯ ನಗರ(Sanjaya Nagara)ದ ಮನೆಯೊಂದಕ್ಕೆ‌ ನುಗ್ಗಿದ್ದ ಆರೋಪಿಗಳು 3.5 ಲಕ್ಷ ನಗದು ಮತ್ತು ಪಿಸ್ತೂಲ್ ದರೋಡೆ ಮಾಡಿದ್ದರು. ಸದ್ಯ ಸಂಜಯನಗರ ಪೊಲೀಸರು ಐವರನ್ನು ಬಂಧಿಸಿ, 1.7 ಲಕ್ಷ ನಗದು ಹಣ(Cash), 1 ಪಿಸ್ತೂಲ್(Gun), 1 ಕಾರು (Car) ಜಪ್ತಿ ಮಾಡಿದ್ದಾರೆ. ಮನೆಗೆ ಬಂದಿದ್ದ  ಆರೋಪಿಗಳು ಏರ್ ಪಿಸ್ತೂಲ್ ಜೊತೆ ನಕಲಿ ಐಡಿ ತಂದಿದ್ದರು. ಬಳಿಕ ಮನೆಯಲ್ಲಿ 45 ನಿಮಿಷ ಪರಿಶೀಲನೆ ನಡೆಸಿದ್ದರು. ದಾಳಿ ವೇಳೆ ಉದ್ಯಮಿ ಮನೆಯಲ್ಲಿ ಇನ್ನೊಂದು ಏರ್ ಪಿಸ್ತೂಲ್ ಪತ್ತೆಯಾಗಿತ್ತು.  ಏರ್ ಪಿಸ್ತೂಲ್ ತೆಗೆದುಕೊಂಡು ಜೊತೆಗೆ 3.5 ಲಕ್ಷ ಹಣದ ಜೊತೆಗೆ ವಾಪಾಸ್ ಆಗಿದ್ದರು.

ಬಳಿಕ ಅನುಮಾನಗೊಂಡ ಮನೆ ಮಾಲೀಕ ನೀಡಿದ ದೂರು ಮೇರೆಗೆ ತನಿಖೆ ಆರಂಭಿಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳು ಸ್ಥಳೀಯವಾಗಿ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ವ್ಯವಹಾರ ತಿಳಿದಿದ್ದ ಆರೋಪಿಗಳು, ಹೆಚ್ಚಿನ ಆದಾಯ ಇದೆ ಎಂದು ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿದ್ದರು.

ಮಂಜುನಾಥ್, ಶೋಯೆಬ್‌, ದುರ್ಗೇಶ್, ಕುಮಾರ್, ಪ್ರಶಾಂತ್ ಬಂಧಿತರು. ಆರೋಪಿ ಮಂಜುನಾಥ್ ಪತ್ರಿಕೆಯೊಂದರ ಉಪ ಸಂಪಾದಕನಾಗಿದ್ದ ಎಂದು ತಿಳಿದು ಬಂದಿದೆ.

ಸಾಲಭಾದೆ ಒಂದೇ  ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ


ಸಾಲಭಾದೆ ತಾಳದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ. ಮೂವರ ಪೈಕಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರನ್ನು ಸ್ಥಳೀಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ .

ಗೀತಾ (37) ಮನೆಯಲ್ಲಿ ಮೃತಪಟ್ಟಿದ್ರೆ, ಭಾನುಪ್ರಕಾಶ್ (40) ಮಗಳು ಲೇಖನಾ (14) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕುಡಿಯುವ ಹಾಲಿಗೆ ಕೆಮಿಕಲ್ ಸೇರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸ್ವಂತ ಕಾರ್ ಹೊಂದಿದ್ದ ಭಾನುಪ್ರಕಾಶ್ ಚಾಲನೆ ಮಾಡಿಕೊಂಡಿದ್ದರು. ಜೊತೆಗೆ ಬಾಗಲಗುಂಟೆಯಲ್ಲಿ ಸ್ವಂತ ಪುಟ್ಟ ಮನೆ ಹೊಂದಿದ್ದು, ಸಂಬಂಧಿಕರ ಬಳಿ 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ರು. ಬೈಕಿನಲ್ಲಿ ದಿನನಿತ್ಯ ಹಾಲು, ಪೇಪರ್ ಮಾರಾಟ ಮಾಡುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ  ಭಾನುಪ್ರಕಾಶ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು.

ಮಾಗಡಿ  ಹೊಳೆಯಲ್ಲಿ ಶವ ಪತ್ತೆ, ಐವರು ಬಂಧನ

ರಾಮನಗರ ಜಿಲ್ಲೆಯ ಂಆಗಡಿ ಕೆರೆಯಲ್ಲಿ ಮೂಟೆ ಕಟ್ಟಿ ಬಿಸಾಡಿದ್ದರು. ಈ ಮೂಟೆಯ ಸಣ್ಣ ಜಾಡು ಹಿಡಿದು ಹೋದ ಪೊಲೀಸರು ಪಾಪಿಗಳನ್ನು ಬಂಧಿಸಿದ್ದಾರೆ.   ಜನವರಿ 20 ರಂದು ಚಿನ್ನ ಖರೀದಿಸಲು ತೆರಳಿದ್ದ ದಿವಾಕರ್ ಮನೆಯಿಂದ 5 ಲಕ್ಷ ರೂಗಳನ್ನು ತೆಗೆದುಕೊಂಡು ಹೊಗಿದ್ದ, ಆದರೆ ದಿವಾಕರ್ ವಾಪಾಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಗನನ್ನ ಪತ್ತೆ ಹಚ್ಚುವಂತೆ ಪೊಲೀಸರ ಬಳಿ ದೂರು ನೀಡಿದ್ದಾರೆ. ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೆರೆಯಲ್ಲಿ ಮೊಟೆಯ ಒಳಗೆ ಶವ ಪತ್ತೆಯಾಗಿದೆ.

ಪೊಲೀಸರಿಗೆ ಮಾಗಡಿ ಕೆರೆಯಲ್ಲಿ ಮೂಟೆ ಸಿಕ್ಕಿದಾಗ ಅದರಲ್ಲಿ ಒಂದು ಐಡಿ ಕಾರ್ಡ್ ಲಭಿಸಿತ್ತು. ಆ ಕಾರ್ಡ್​ನಲ್ಲಿ ದಿವಾಕರ್ ಎನ್ನುವ ಹೆಸರು ಹಾಗೂ ಮನೆ ವಿಳಾಸ ಇತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ದಿವಾಕರ್ ಕೊಲೆಯಾಗಿರುವುದನ್ನ ಕಂಡುಕೊಂಡು, ಆ ಮೂಲಕ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ದಿವಾಕರ್​ನ ಕತ್ತು ಹಿಸುಕಿ ಕೊಂದಿದ್ದ ಮಂಜುನಾಥ್ ಮತ್ತು ರಾಜು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top