ಭಟ್ಕಳ ತಾಲೂಕಿನಲ್ಲಿ ಬೆಳ್ಳಂಬೆಳಿಗ್ಗೆ ಮಾಸ್ಕ ಹಾಕದವರಿಗೆ ದಂಡ : ಸಹಾಯಕ ಆಯುಕ್ತೆ ಮಮತಾ ದೇವಿಯವರ ನೇತ್ರತ್ವದಲ್ಲಿ ಕಾರ್ಯಾಚರಣೆ

ಭಟ್ಕಳ ದೇಶದಾಧ್ಯಂತ ಕೋರೊನಾ ರೂಪಾಂತರಿ ಒಮಿಕ್ರಾನ್‌ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ದೇಶದಾಧ್ಯಂತ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಈ ಹಿನ್ನೆಲೆ ಇಂದು ತಾಲೂಕ ಸಹಾಯಕ ಆಯುಕ್ತರಾದ ಮಮತಾ ದೇವಿಯರ ನೇತ್ರತ್ವದಲ್ಲಿ ತಾಲೂಕಾಡಳಿತವು ಮಾಸ್ಕ ಹಾಕದ ಸಾರ್ವಜನಿಕರಿಗೆ ದಂಡವಿದಿಸಿತು

ಬೆಳ್ಳಂಬೆಳಿಗ್ಗೆಯೆ ತಾಲೂಕಿನಾಧ್ಯಂತ ಸಹಾಯಕ ಆಯುಕ್ತರ ನೆತ್ರತ್ವದಲ್ಲಿ ತಾಲೂಕ ತಹಶಿಲ್ದಾರ್‌ ಒಳಗೊಂಡಂತೆ ಅಧಿಕಾರಿಗಳ ತಂಡವು ಕಾರ್ಯಾಚರಣೆಗಿಳಿದು ಮಾಸ್ಕದರಿಸದವರಿಗೆ ದಂಡವನ್ನು ವಿದಿಸಲಾಯಿತು ಹಾಗು ಮಾಸ್ಕ ದರಿಸದ ಸಾರ್ವಜನಿಕರಿಗೆ ಮಾಸ್ಕ ಹಾಕದೆ ಇರುವುದರಿಂದ ಯಾವ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬುವುದನ್ನು ತಿಳಿಸಿ ಹೇಳಲಾಯಿತು

ಈ ಬಗ್ಗೆ ಸಹಾಯಕ ಆಯುಕ್ತರಾದ ಮಮತಾ ದೇವಿ ಮಾತನಾಡಿ ದೇಶದಾಧ್ಯಂತ ಓಮಿಕ್ರಾನ್‌ ಸೊಂಕು ಹರಡುತ್ತಿದ್ದು ಇದು ದೇಶಕ್ಕೆ ಮಾರವಾಗಿರುತ್ತದೆ ಆದ್ದರಿಂದ ನಾವೆಲ್ಲರು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತಿದ್ದೆವೆ ಈ ನಿಟ್ಟಿನಲ್ಲಿ ಜನರಲ್ಲಿ ಜಾಗ್ರತಿ ಮುಡಿಸುವ ಸಲುನಾಗಿ ಇಂದು ಮಾಸ್ಕ ಹಾಕದವರಿಗೆ ದಂಡ ವಿದಿಸಲಾಗಿದೆ ನಮಮ ಉದ್ದೆಶ ಸಾಮಾಜಿಕ ಕಳಕಳಿಯಾಗಿರುತ್ತದೆ ಸಾರ್ವಜನಿಕರು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು

ಈ ಸಂದರ್ಬದಲ್ಲಿ ಪೋಲಿಸ್‌ ಅಧಿಕಾರಿ ದಿವಾಕರ ಪುರಸಭಾ ಮುಖ್ಯಾಧಿಕಾರಿ ರಾಧಿಕಾ, ಹಾಗು ಪೊಲಿಸ್‌ ಸಿಬ್ಬಂದಿಗಳು ಪುರಸಭಾ ಸಿಬಂದಿಗಳು ಹಾಜರಿದ್ದರು

WhatsApp
Facebook
Telegram
error: Content is protected !!
Scroll to Top