ಭಟ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಲೆಕ್ಕಕ್ಕಿಲ್ಲವಾದ ಕೊರೊನಾ ನಿಯಮಾವಳಿ: ಊರಿಗೆ ಬುದ್ದಿ ಹೇಳುವವರು ತಾವು ಮಾಡಿದ್ದಾದರು ಏನು ?

ಭಟ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಸಹಿತ ಸದಸ್ಯರು ಉಪಾಧ್ಯಕ್ಷರ ಯಾದಿಯಾಗಿ ಯಾರು ಮಾಸ್ಕ ದರಿಸದೆ ಕೊರೊನಾ ನಿಯಮಾವಳುಯನ್ನು ಉಲ್ಲಂಗಿಸಿದ ಘಟನೆ ನಡೆದಿದೆ . ಊರಿಗೆ ಬುದ್ದಿ ಹೇಳುವವರು ಒಲೆಯ ಮುಂದೆ ಅದೇನೋ ಮಾಡಿಕೊಂಡರಂತೆ ಹಾಗಾಗಿದೆ ನಮ್ಮ ಪುರಸಬೆ ಪರಿಸ್ಥಿತಿ ಪುರಭೆಯಲ್ಲಿ ಏನಾಗಿತ್ತು ಹೇಗೆ ಕೊರೊನಾ ನಿಯಮಾವಳಿಯನ್ನು ಗಾಳಿಗೆ ತುರಿದ್ದಾರೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೊಡ್ಕೊಂಡ ಬರೋಣ ಬನ್ನಿ

ತಾಲೂಕಿನಲ್ಲಿ ಪುರಸಭೆಯು ಕೊರೊನಾ ನಿಯಮಾವಳಿ ಮಾಸ್ಕ ಹಾಕಲಿಲ್ಲ ಎಂಬ ನೆಪವನ್ನು ಮುಂದಿಟ್ಟುಕೊಂಡು ದಾರಿಯಲ್ಲಿ ಹೋಗುವ ಬಡ ಅಮಾಯಕ ಸಾರ್ವಜನಿಕರಿಗೆ ಮಕ್ಕಳು ಮಹಿಳೆಯರು ವೃದ್ದರು ಎಂಬ ಯಾವುದೇ ಬೇದಬಾವವಿಲ್ಲದೆ ಹಿಡಿದಿಡಿದು ದಂಡವನ್ನು ವಿದಿಸುತ್ತಿತ್ತು ಬೈಕ್ಗಳಿ ಹೊಗುವವರನ್ನು ಕೂಡ ನಿಲ್ಲಿಸಿ ನಿಯಮಕ್ಕೆ ವಿರುದ್ದವಾಗಿ ದಂಡವಿಸುತ್ತಿದ್ದರು ಆದರೆ ಇದೆ ನಮ್ಮ ಪುರಸಭೆಯು ತನ್ನ ಸಾಮಾನ್ಯ ಸಭೆಯಲ್ಲೆ ಮಾಸ್ಕಗಳನ್ನು ಹಾಕದೆ ಕೊರೊನಾ ನಿಯಮಾವಳಿಯನ್ನು ಮುರಿಯುದರ ಮೂಲಕ ಸಾರ್ವಜನಿಕರಿಗೆ ದಂಡಹಾಕಿ ನೀತಿ ಪಾಠಮಾಡುವ ನೈತಿಕತೆಯನ್ನೆ ಕಳೆದುಕೊಂಡಿದೆ

ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗು ಸದಸ್ಯರುಗಳ ಮದ್ಯ ಕೊಲಾಹಲವೆ ಎರ್ಪಟ್ಟಿತ್ತು ಭಟ್ಕಳ ಪುರಸಭೆಯಲ್ಲಿ ಎಲ್ಲಾ ಸರಿ ಇದೆ ಎಂದು ಅಂದು ಕೊಳ್ಳುತ್ತಿರುವಾಗಲೆ ಏನು ಸರಿಯಿಲ್ಲಾ ಎಂಬುವುದನ್ನು ಪುರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳೆ ಸಾಭಿತು ಮಾಡಿದ್ದಾರೆ ಸರಿ ಸಭೆ ಎಂದ ಮೇಲೆ ಕೂಗಾಟ ಚಿರಾಟ ಸರ್ವೆ ಸಾಮಾನ್ಯವೆ ಅಂದುಕೊಳ್ಳೊಣ ಆದರೆ ಸಬೆಯಲ್ಲಿ ಕೊರೊನಾ ನಿಯಮಾವಳಿಯನ್ನು ಮುರಿಯುದು ಕೂಡಾ ಸರ್ವೆ ಸಾಮಾನ್ಯವೆ ಹಾಗಾದರೆ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೆ ಇವರು ಮಾಡಿದ್ದೆ ನೀತಿಯೆ ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವುದಾದರು ಏನು ಸಾಮಾನ್ಯ ಪ್ರಜೇಗಳಿಗೆ ಒಂದು ಕಾನೂನು ಇವರಿಗೆ ಒಂದು ಕಾನೂನೆ ಒಂದು ವೇಳೆ ಇವರ ಉದ್ದಟತನದಿಂದ ಕೊರೊನಾ ಮಹಾಮಾರಿ ಹೆಚ್ಚಾದರೆ ಇದಕ್ಕೆ ಯಾರು ಉತ್ತರಿಸಿ ಯಾರು ಕೊರೊನಾ ನಿಯಮಾವಳಿಯನ್ನು ಗಾಳಿಗೆ ತೂರಿದ ಈ ಪುರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳಿಗೆ ಕಾನುನಿನ ಪ್ರಕಾರ ಶಿಕ್ಷೇ ಇಲ್ಲವೆ ಇವರಿಗೆ ಯಾರು ದಂಡ ವಿದಿಸುವವರಿಲ್ಲವೆ ಎನ್ನುವ ಪ್ರಶ್ನೆ ಸಾರ್ಜನಿಕರ ಮುಂದೆ ಬೂತದಂತೆ ಎದ್ದು ನಿಂತಿದೆ

ಈ ಬಗ್ಗೆ ಸಂಬಂದಿಸಿದ ಅಧಿಕಾರಿ ಜಾಣ ಕುರುಡುತನ ತೊರಿಸುತ್ತಿದ್ದಾರೆ ಎಂಬುವುದು ಜಗಜ್ಜಾರಿ ಆದ್ದರಿಂದ ಇದಕ್ಕೆ ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸೂಕ್ತ ಕ್ರಮವನ್ನು ಕೈಗೊಂಡು ಮುಂದೆ ಆಗುವ ಅನಾಹುತಕ್ಕೆ ಬ್ರೇಕ್‌ ಹಾಕಿಯಾರೆ ಎಂದು ಕಾದು ನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top