VIMS Bellary Recruitment 2022: ಬಳ್ಳಾರಿ ವಿಮ್ಸ್​​ನಲ್ಲಿ 130 ಹುದ್ದೆಗಳು ಖಾಲಿ, ಜ.10ರಂದು ನೇರ ಸಂದರ್ಶನ

ಡಿಸೆಂಬರ್ 31ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜನವರಿ 10ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಅಭ್ಯರ್ಥಿಗಳು ಪಾಲ್ಗೊಳ್ಳಬಹುದು

VIMS Bellary Recruitment 2022: ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ-ಬಳ್ಳಾರಿ(Vijayanagar Institute of Medical Sciences Bellary) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 130 ನರ್ಸಿಂಗ್​ ಆಫೀಸರ್, ಡ್ರೈವರ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ​​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜನವರಿ 10ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ vimsbellary.org.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ-ಬಳ್ಳಾರಿ
ಹುದ್ದೆಯ ಹೆಸರುನರ್ಸಿಂಗ್​ ಆಫೀಸರ್, ಡ್ರೈವರ್, ಲ್ಯಾಬ್ ಟೆಕ್ನಿಷಿಯನ್
ಒಟ್ಟು ಹುದ್ದೆಗಳು130
ವಿದ್ಯಾರ್ಹತೆSSLC, PUC, ಡಿಪ್ಲೊಮಾ, ಬಿಎಸ್ಸಿ ನರ್ಸಿಂಗ್
ಉದ್ಯೋಗದ ಸ್ಥಳಬಳ್ಳಾರಿ
ವೇತನನಿಯಮಾನುಸಾರ
ಸಂದರ್ಶನ ನಡೆಯುವ ದಿನಾಂಕ10/01/2022
ಹುದ್ದೆಯ ಮಾಹಿತಿ:
ನರ್ಸಿಂಗ್ ಅಧಿಕಾರಿ- 110
ರೇಡಿಯೋಗ್ರಾಫರ್- 1
ಫಾರ್ಮಸಿ ಅಧಿಕಾರಿ- 2
ಎಕ್ಸ್-ರೇ ತಂತ್ರಜ್ಞರು- 3
ಭೌತಚಿಕಿತ್ಸಕ- 1
ಆಹಾರ ತಜ್ಞ- 1
ಲ್ಯಾಬ್ ಟೆಕ್ನಿಷಿಯನ್- 3
ಚಾಲಕ -6
ಡಯಾಲಿಸಿಸ್ ತಂತ್ರಜ್ಞ -1
CT ತಂತ್ರಜ್ಞ-2
WhatsApp
Facebook
Telegram
error: Content is protected !!
Scroll to Top