ಭಟ್ಕಳ ಜಾಲಿ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ತಂಜಿಂ ಗೆ ವಿಜಯದ ಮಾಲೆ: ಮಕಾಡೆ ಮಲಗಿದ ರಾಜಕಿಯ ಪಕ್ಷಗಳು

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 13 ಸ್ಥಾನಗಳ ಪೈಕಿ 6 ಸ್ಥಾನಕ್ಕೆ ತಂಜಿಮ್‌ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದು ನಾಲ್ಕು ಸ್ತಾನಕ್ಕೆ ಕಾಂಗ್ರೇಸ್‌ ಮೂರು ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟಿಕೊಳ್ಳುವಂತಾಯಿತು ರಾಜಕಿಯ ಪಕ್ಷಗಳು ಜಾಲಿ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ಆಟಕುಂಟು ಲೆಕ್ಕಕ್ಕಿಲ್ಲ ಎಂಬಾತಾಗಿದೆ

ಜಾಲಿ ಪಟ್ಟಣ ಪಂಚಾಯತ್‌ ಚುನಾವಣೆಯು ಮೊದಲಿನಿಂದಲು ಕುತುಹಲಕ್ಕೆ ಕಾರಣವಾಗಿತ್ತು ರಾಜಕಿಯ ವಲಯದಲ್ಲಿ ಜಾಲಿ ಪಟ್ಟಣ ಪಂಚಾಯತ್‌ ಚುನಾವಣೆ ಚರ್ಚೆಗೆ ಕೂಡ ಗ್ರಾಸವಾಗಿತ್ತು ತಾಲೂಕಿನ ಪ್ರತಿಷ್ಟಿತ ಸಂಸ್ಥೆ ತಂಜಿಮ್‌ ತನ್ನ ಅಭ್ಯರ್ಥಿಯನ್ನು ಚುನಾವಣಾ ಅಖಾಡಕ್ಕೆ ಇಳಿಸುವುದರ ಮೂಲಕ ಜಾಲಿ ಪಟ್ಟಣ ಪಂಚಾಯತ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು ಇಲ್ಲಿ ಮುಖ್ಯವಾಗಿ ತಾಲೂಕಿನ ಪುರಸಭೆ ಅಥವಾ ಪಟ್ಟಣ ಪಂಚಾಯತ್‌ ವ್ಯಾಪ್ತಿಯು ಮುಸ್ಲಿಂ ಸಮುದಾಯದ ಬಾಹುಳ್ಳ ಹೊಂದಿರುವ ಪ್ರದೇಶವಾಗಿದ್ದು ಈ ಕಾರಣ ತಂಜಿಮ್‌ ಈ ಪ್ರದೇಶಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದರಲ್ಲಿಯು ಸಪಲವಾಗುತ್ತಿತ್ತು ಈ ಕಾರಣ ರಾಜಕಿಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ದಿಸಿದರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದರಲ್ಲಿ ವಿಪಲವಾಗುತ್ತಲೆ ಬಂದಿದೆ

ಜಾಲಿ ಪಟ್ಟಣ ಪಂಚಾಯತ್‌ ಚುನಾವಣೆ

ಈ ಬಾರಿಯು ಕೂಡಾ ಜಾಲಿ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ 13 ಸೀಟ್‌ ಗಳಲ್ಲಿ ಕಾಂಗ್ರೇಸ್‌ 4 ಬಿಜೆಪಿ 3 ಸ್ಥಾನಗಳನ್ನು ಪಡೆದರೆ ತಂಜಿಮ್‌ ಬೆಂಬಲಿತ 6 ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಬರುವುದರ ಮೂಲಕ ತಾಲೂಕಿನಲ್ಲಿ ತಂಜಿಂಬ ತನ್ನ ಕದಂಬ ಬಾಹುವನ್ನು ಎಷ್ಟರ ಮಟ್ಟಿಗೆ ಚಾಚಿಕೊಳ್ಳುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ

ಇದು ಒಂದು ಕಡೆಯಾದರೆ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ 72 ಮತಗಳು ನೋಟಾಕ್ಕೆ ಬಿದ್ದಿರುತ್ತದೆ ಬಹುತೇಕ ತಂಜಿಮ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳ ಆಯ್ಕೆಯಿಂದ ಜಾಲಿ ಪಟ್ಟಣ ಪಂಚಾಯತ್‌ ಅಲ್ಲಿ ತಂಜಿಂ ಅಧಿಕಾರ ನಡೆಸುವಂತಾಗಿದೆ ಮುಖ್ಯವಾಗಿ ಎಸ್‌ ಡಿ ಪಿ ಜಿಲ್ಲಾಧ್ಯಕ್ಷ ತೌಪಿಕ್‌ ಭ್ಯಾರಿ ಜಿಲ್ಲಾ ಕಾರ್ಯದರ್ಶಿ ವಾಸಿಂ ಮನೆಗಾರ ತಂಜಿಂ ಬೆಂಬಲದಿಂದ ಗೆಲುವು ಸಾದಿಸಿದ್ದಾರೆ ವಾರ್ಡ ನಂ 1ರ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಸ್ಪರ್ದಿಸಿ ಗೆಲುವು ಸಾದಿಸಿದ್ದ ಈಶ್ವರ ಮೋಗೆರ್‌ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದಾದ ಹಿನ್ನೆಲೆಯಲ್ಲಿ ನ್ಯಾಯಾಲದ ತಿರ್ಪು ಹಾಗು ಚುನಾವಣಾ ಆಯೋಗದ ನಿಂಬಂದನೆಗೆ ಏನು ಎಂದು ಕಾದು ನೋಡಬೇಕಾಗಿದೆ

ಈ ಭಾರಿಯ ಚುನಾವಣೆ ತುಂಬ ಸುಸುತ್ರವಾಗಿ ಶಾಂತಿಯುತವಾಗಿ ನಡೆದಿದ್ದು ಯಾವುದೆ ಗೊಂದಲ ಗಲಾಟೆಗೆ ಆಸ್ಪದವೆ ಇಲ್ಲದೆ ನಡೆಸಲಾಗಿದೆ ಇದರ ಶ್ರೇಯಸ್ಸು ತಾಲೂಕ ದಂಡಾಧಿಕಾರಿಗಳಾದ ಮಮತಾ ದೇವಿ ಹಾಗು ತಹಶಿಲ್ದಾರ್‌ ರವಿಚಂದ್ರರವರಿಗೆ ಸಲ್ಲಬೇಕಾಗಿದೆ ಇಷ್ಟುವರ್ಷ ಒಂದಿಲೊಂದು ಗೊಂದಲಗಳಿಗೆ ಆಸ್ಪದವಾಗುತ್ತಿತ್ತು ಆದರೆ ಈ ವರ್ಷ ಚುನಾವಣೆ ಶಾಂತಿಯುತವಾಗಿ ನಡೆದಿದೆ ಈ ಬಗ್ಗೆ ತಾಲೂಕಿನಾಧ್ಯಂತ ಪ್ರಶಂಸೆ ವ್ಯಕ್ತವಾಗಿದೆ

ಒಟ್ಟಾರೆ ಜಾಲಿ ಪಟ್ಟಣ ಪಂಚಾಯತ್‌ ತಂಜಿಂ ತನ್ನ ತೆಕ್ಕೆಗೆ ತೆಗೆದುಕೊಂಡಿರುತ್ತದೆ

WhatsApp
Facebook
Telegram
error: Content is protected !!
Scroll to Top