ಮನೆ ಒಳಗಡೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿ ಭೀಕರ ದಾಳಿ

ಭಟ್ಕಳ: ಮುರುಡೇಶ್ವರ ಮಾವಳ್ಳಿ-1ರ ಸೋನಾರಕೇರಿಯಲ್ಲಿ ಮನೆ ಒಳಗಡೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿಯೊಂದು ಮನೆಯ ಒಳಗೆ ನುಗ್ಗಿ ಭೀಕರ ದಾಳಿ ನಡೆಸಿ ಕಚ್ಚಿದ ಘಟನೆ ಮಂಗಳವಾರದಂದು ನಡೆದಿದೆ. 

ನಾಯಿಯಿಂದ ದಾಳಿಗೊಳಗಾಗಿ ಗಾಯಗೊಂಡ ಮಗು ದ್ರವ್ಯಾ ಸಂತೋಷ ನಾಯ್ಕ ಮುರುಡೇಶ್ವರ ಮಾವಳ್ಳಿ-1 ಸೋನಾರಕೇರಿ ನಿವಾಸಿ ಎಂದು ತಿಳಿದು ಬಂದಿದೆ.  ಈಕೆ ಮಕ್ಕಳೊಂದಿಗೆ ತನ್ನ ಮನೆಯೊಳಗೆ ಆಟವಾಡುತ್ತಿದ್ದ ವೇಳೆ ಹೊರಗಿನಿಂದ ಬಂದ ಬೀದಿ ನಾಯಿಯೊಂದು ಏಕಾಏಕಿ ಮನೆಯೊಳಗೆ ನುಗ್ಗಿ ಮಗು ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಎರಡೂವರೆ ವರ್ಷದ ಮಗುವಿನ ಮುಖದ ಭಾಗಕ್ಕೆ ಕಚ್ಚಿದ್ದು ಮಗುವಿನ ತುಟಿ ಹಾಗೂ ಕಣ್ಣಿನ ಕೆಳ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿದ್ದು, ದಾಳಿಯಿಂದ ಮಗುವಿನ ಪಾಲಕರು ತಪ್ಪಿಸಿ ತಕ್ಷಣ ಮಗುವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ.

WhatsApp
Facebook
Telegram
error: Content is protected !!
Scroll to Top