ಪ್ಯಾರಾಸೈಲಿಂಗ್ ವೇಳೆ ತುಂಡಾಟ ಹಗ್ಗ : ಸಮುದ್ರಕ್ಕೆ 100 ಮೀಟರ್ ಎತ್ತರದಿಂದ ಬಿದ್ದ ಮಹಿಳೆಯರು

ಬರೀ ಒಂದು ತಿಂಗಳ ಹಿಂದೆಯಷ್ಟೇ ದಿಯುನಲ್ಲಿ ಸಾಹಸಯಾನದಲ್ಲಿ ತೊಡಗಿದ್ದ ಗುಜರಾತಿನ ದಂಪತಿ ಬೆಚ್ಚಿಬೀಳುವ ಸನ್ನಿವೇಶವನ್ನ ಅನುಭವಿಸಿದ್ದರು. ನಾಗೋವಾ ಬೀಚ್‌ನಲ್ಲಿ ಖುಷಿಯಿಂದ ಪ್ಯಾರಾಸೈಲಿಂಗ್ ಮಾಡುವಾಗ ಎತ್ತರಕ್ಕೆ ಸಾಗುತ್ತಿದ್ದಂತೆಯೇ ಹಗ್ಗ ತುಂಡಾಗಿ ಇವರು ಸಮುದ್ರಕ್ಕೆ ಬಿದ್ದಿದ್ದರು. ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಇದೇ ಸನ್ನಿವೇಶವನ್ನು ನೆನಪಿಸುವಂತಹ ಘಟನೆಯೊಂದು ನಡೆದಿದೆ.

ಸ್ನೇಹಿತರು ಕುಟುಂಬದವರೊಂದಿಗೆ ವಿಹಾರಕ್ಕೆಂದು ಹೋದಾಗ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸಂತೋಷವೇ ಬೇರೆ. ಇದು ಅದ್ಭುತ ಅನುಭವವನ್ನು ಕೊಡುತ್ತದೆ. ಆದರೆ, ಒಮ್ಮೊಮ್ಮೆ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯದಿಂದ ಈ ಖುಷಿಯ ಕ್ಷಣವೇ ಭಯಾನಕವಾಗಿ ಬದಲಾಗುತ್ತದೆ. ಇದು ಕೂಡಾ ಅಂತಹದ್ದೇ ಒಂದು ಘಟನೆ. ಮುಂಬೈನ ಸಾಕಿನಾಕದ ಕುಟುಂಬವೊಂದು ಅನುಭವಿಸಿದ ಆಘಾತಕಾರಿ ಕ್ಷಣ ಇದು.

ಇಬ್ಬರು ಮಹಿಳೆಯರು ಪ್ಯಾರಾ ಸೈಲಿಂಗ್‌ನಲ್ಲಿ ತೊಡಗಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಇಬ್ಬರೂ ಖುಷಿಯಾಗಿ ತಮ್ಮ ಸಾಹಸಯಾನ ಮಾಡುತ್ತಾರೆ. ಆದರೆ, ಒಂದು ಹಂತದಲ್ಲಿ ದೋಣಿಗೆ ಕಟ್ಟಿದ್ದ ಹಗ್ಗ ತುಂಡಾಗುತ್ತದೆ. ಪರಿಣಾಮ, ಪ್ಯಾರಾಸೈಲಿಂಗ್‌ ಖುಷಿ ಅನುಭವಿಸುತ್ತಿದ್ದ ಈ ಇಬ್ಬರು ಸುಮಾರು 100 ಮೀಟರ್ ಎತ್ತರದಿಂದ ಸಮುದ್ರಕ್ಕೆ ಬಿದ್ದಿದ್ದರು. ಅದೃಷ್ಟವಶಾತ್, ಅವರು ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರು. ಹೀಗಾಗಿ, ತಕ್ಷಣ ದೋಣಿಯಲ್ಲಿದ್ದವರು ಈ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲಿಗೆ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು.

ಸದ್ಯ ಈ ಆಘಾತಕಾರಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜತೆಗೆ, ಇಂತಹ ಸಾಹಸ ಕ್ರೀಡಾ ನಿರ್ವಾಹಕರು ಅನುಸರಿಸುವ ಸುರಕ್ಷತಾ ಕಾರ್ಯವಿಧಾನದ ಬಗ್ಗೆಯೂ ಚರ್ಚೆ ಕೂಡಾ ಹುಟ್ಟಿದೆ. ನಿಮಗೆ ಕೂಡಾ ಈ ಭಯಾನಕ ದೃಶ್ಯ ಆಘಾತ ತಂದಿರುವುದಂತು ಸತ್ಯ.

WhatsApp
Facebook
Telegram
error: Content is protected !!
Scroll to Top