ಆರು ಮದುವೆಯಾದ ಭೂಪ : ವಿಚ್ಛೇದಿತ ಮಹಿಳೆಯರೇ ಈತನ ಟಾರ್ಗೆಟ್‌

ಬೆಂಗಳೂರು :  ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಫೋಟೊಗಳನ್ನು ಹಾಕಿ, ವಿಚ್ಛೇದಿತ ಮಹಿಳೆಯರನ್ನು ಪರಿಚಯಿಸಿಕೊಂಡು ವಿವಾಹ ಮಾಡಿಕೊಂಡು ವಂಚಿಸುತ್ತಿದ್ದವನ ವಿರುದ್ಧ ಆತನ ಆರನೇ ಪತ್ನಿ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಅವರಿಗೆ ದೂರು ನೀಡಿದ್ದಾರೆ.

32 ವರ್ಷದ ದೂರವಾಣಿ ನಗರದ ಮಹಿಳೆಯೊಬ್ಬರು ತನ್ನ ಪತಿ ಸೈಯ್ಯದ್‌ ತಹಸೀನ್‌ ಅಹಮ್ಮದ್‌ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾರೆ. ದೂರುದಾರ ಮಹಿಳೆ ಈ ಹಿಂದೆ ವೈಯಕ್ತಿಕ ಕಾರಣಕ್ಕೆ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ನಂತರ ತನಗೆ ಹೊಂದುವ ವರನಿಗೆ ಶಾದಿ ಡಾಟ್‌ಕಾಂ ವೆಬ್‌ಸೈಟ್‌ನಲ್ಲಿ ಹುಡುಕುತ್ತಿದ್ದರು. 2018 ರಲ್ಲಿ ಆರೋಪಿ ಸೈಯ್ಯದ್‌ ಇವರ ಪ್ರೊಫೈಲ್‌ಗೆ ರಿಕ್ವೆಸ್ಟ್‌ ಕಳುಹಿಸಿದ್ದ. ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ 2018 ನ.15 ರಂದು ವಿವಾಹವಾಗಿದ್ದರು.

‘ನಮ್ಮ ಮನೆ ನಿರ್ಮಾಣ ಹಂತದಲ್ಲಿದೆ. ಸದ್ಯ ನಮ್ಮ ಸಹೋದರಿ ಮನೆಯಲ್ಲಿ ವಾಸಿಸುತ್ತಿದ್ದೇನೆ. ಮನೆ ನಿರ್ಮಾಣ ಪೂರ್ಣಗೊಳ್ಳುವವರೆಗೂ ನಿಮ್ಮ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಬೇಕು’ ಎಂದು ಕೇಳಿಕೊಂಡಿದ್ದ. ಇದಕ್ಕೆ ದೂರುದಾರ ಮಹಿಳೆ ಮನೆಯವರು ಒಪ್ಪಿದ್ದರು. ವಿವಾಹವಾದ ಕೆಲ ದಿನಗಳಲ್ಲೇ ಸೈಯ್ಯದ್‌ ಪತ್ನಿಗೆ ಟಾರ್ಚರ್‌ ಕೊಡಲು ಆರಂಭಿಸಿದ್ದ. ನಿರ್ಮಾಣ ಹಂತದಲ್ಲಿರುವ ಮನೆ ಹಾಗೂ ಉದ್ಯಮ ನಡೆಸುವ ಉದ್ದೇಶದಿಂದ ವರದಕ್ಷಿಣೆ ಕೊಡುವಂತೆ ಕಿರುಕುಳ ಕೊಡುತ್ತಿದ್ದ. ಸೈಯ್ಯದ್‌ ಕಿರುಕುಳ ತಾಳಲಾರದೆ ಪತ್ನಿ ತವರು ಮನೆಯವರು 2 ಲಕ್ಷ ರೂ., 6 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ್ದರು. ಇದಕ್ಕೆ ತೃಪ್ತನಾಗದ ಸೈಯದ್‌ ಪದೇ ಪದೆ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ.

ಈತನ ಬಣ್ಣ ಬಣ್ಣದ ಮಾತಿಗೆ ಮರಳಾಗುತ್ತಿದ್ದ ಮಹಿಳೆಯರನ್ನು ವಿವಾಹವಾಗುತ್ತಿದ್ದ. ಅಲ್ಲದೇ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವುದಾಗಿ ಹೇಳುತ್ತಿದ್ದ. ವಿವಾಹವಾದ ಕೆಲ ದಿನಗಳಲ್ಲೇ ಹೊಸ ಉದ್ಯಮ ಆರಂಭಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ಪರಾರಿಯಾಗುತ್ತಿದ್ದ. ಆರೋಪಿಯ ಕುಟುಂಬಸ್ಥರು ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

WhatsApp
Facebook
Telegram
error: Content is protected !!
Scroll to Top